Sunday, October 19, 2008
ಮತಾಂತರ ಅಷ್ಟು ಹಗುರವಾದ ವಿಷಯವಲ್ಲ !!!
ನವಂಬರ್ ೧೯ ರಂದು ರವಿ ಬೆಳಗೆರೆ ಅವರ (ಭೈರಪ್ಪನವರ ಮತಾಂತರ ವಿಷಯದ ಲೇಖನಕ್ಕೆ) ಪ್ರತಿಕ್ರಿಯೆಯನ್ನು ಓದಿದೆ. ಓದಿದ ಒಡನೆ ಒಂದು ವಿಷಯವು ಬಹಳ ಸ್ಪಷ್ಟವಾಗಿ ತೋರುತ್ತದೆ. ಬೆಳಗೆರೆ ಅವರು ಮತಾಂತರವನ್ನು ಬಹಳ ಹಗುರವಾಗಿ ತೆಗೆದುಕೊಂಡಿದ್ದಾರೆ. ಕೆಲವು ವಿಷಯಗಳನ್ನು ನಾನು ಇಲ್ಲಿ ಪ್ರಸ್ತುತ ಪಡಿಸಲು ಬಯಸುತ್ತೇನೆ.
ಭಯೋತ್ಪಾದನೆ ವಿಷಯವನ್ನು ತೆಗೆದುಕೊಳ್ಳೋಣ: ನಮಗೆ ಬೇರೆ ದೇಶದಲ್ಲಿ ನಡೆಯುವ ಭಯೋತ್ಪಾದನೆಯನ್ನು ತಡೆಯುವ ಅಗತ್ಯವಿಲ್ಲದೇ ಇರಬಹುದು, ಆದರೆ ನಮ್ಮ ದೇಶದ ನಾಗರೀಕರನ್ನು ರಕ್ಷಿಸುವ ಕರ್ತವ್ಯ ನಮ್ಮದಲ್ಲವೇ? ಇಂಗ್ಲೆಂಡ್ ನಲ್ಲಿ ಕಳೆದ ಬಾರಿ ಭಯೋತ್ಪಾದನೆ ನಡೆದದ್ದು ನಿಜ, ಆದರೆ ಅದರ ನಂತರ ಎಷ್ಟು ಅಂತಹ ಘಟನೆಗಳು ನಡೆದವು? ಇದೇ ಸಮಯದಲ್ಲಿ ನಮ್ಮ ದೇಶದಲ್ಲಿ ಎಷ್ಟು ಭಯೋತ್ಪಾದಕ ಕೃತ್ಯಗಳು ನಡೆದವು? ಅದೂ ಅಲ್ಲದೆ ನಾವು ನಮ್ಮ ದೇಶದ ಪರಿಸ್ಥಿತಿಯನ್ನು ಸುಧರಿಸಿಕೊಳ್ಳಬೇಕೆ ಅಥವಾ ಆಫ್ಘಾನಿಸ್ಥನದಂತಹ ದೇಶದ ಪರಿಸ್ಥಿತಿಯನ್ನ್ನು ನೋಡಿ ಸಮಾಧಾನ ತಂದುಕೊಳ್ಳಬೇಕೆ?
ಹಾಗಿದ್ದರೆ ಬೆಳಗೆರೆ ಅವರು ನಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಏಕೆ ಅಷ್ಟು ತಲೆಕೆಡಿಸಿಕೊಂಡಿದ್ದಾರೆ? ಜಿಮ್ಬಬ್ವೆಯಲ್ಲಿನ ಪರಿಸ್ಥಿತಿಯನ್ನು ನೋಡಿ ಸಮಾಧಾನ ತಂದುಕೊಳ್ಳಬಹುದಲ್ಲವೇ? ಇಂದು ಬಿದ್ದು ನಾಳೆ ಏಳುವ ರಿಯಲ್ ಎಸ್ಟೇಟ್ , ಷೇರು ಮಾರುಕಟ್ಟೆಯ ಬಗ್ಗೆ ನಮ್ಮ ಗಮನ ಹರಿಸಬೇಕೆ ಅಥವಾ ದಿನ ದಿನಕ್ಕೂ ಕ್ಷೀಣಿಸುತ್ತಿರುವ ಶೇಕಡಾವಾರು ಹಿಂದೂಗಳ ಬಗ್ಗೆ ಗಮನ ಹರಿಸಬೇಕೆ?
ಬೆಳಗೆರೆ ಅವರು ಓದುಗರನ್ನು "ಶಂಕರಾಚಾರ್ಯರೂ ಸಹ ಅಗ್ರೆಸ್ಸಿವ್ ಪ್ರಚಾರ ಮಾಡಿದ್ದರು" ಎಂದು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಶಂಕರಾಚಾರ್ಯರು ಹಿಂದೂ ಧರ್ಮದ ಪ್ರಚಾರದಲ್ಲಿ ಯಾರನ್ನಾದರೂ ಹಿಂಸೆ ಅಥವಾ ಆಮಿಷದಿಂದ ಮತಂತರಗೊಳಿಸಿದರೆ?
ಯಾವುದೇ ಸೇವೆಯ ಹಿಂದೆ ಅದರ ಉದ್ದೇಶ ಬಹಳ ಮುಖ್ಯ. ಇದು ನಮ್ಮ ಧರ್ಮದ ಒಂದು ಮುಖ್ಯವಾದ ನಂಬಿಕೆ. ಯಾವುದೊ ದುರುದ್ದೇಶವನ್ನಿಟ್ಟುಕೊಂಡು ಸಹಾಯ ಅಥವಾ ಸೇವೆ ಮಾಡುವುದು ಸರಿಯೇ? ಇದರ ಬಗ್ಗೆ ಉದಾಹರಣೆ ನೀಡಲು ನಾನು ಬಯಸುವುದಿಲ್ಲ. ಓದುಗರೇ ಇದನ್ನು ಊಹಿಸಿಕೊಳ್ಳಬಹುದು. ಬೆಳಗೆರೆ ಅವರೇ ಹೇಳುವಂತೆ ಥೆರೆಸಾರ ವ್ಯಾಪ್ತಿ ಮತ್ತು ಉದ್ದೇಶ ವಿಭಿನ್ನವಾದದ್ದು. ಉದ್ದೇಶ: ಮತಾಂತರ ; ವ್ಯಾಪ್ತಿ: ಮಿಷಿನರಿಗಳು ಕಳುಹಿಸಿದ ಹಣದ ಮೇಲೆ ಆಧಾರಿತ. ರವಿ ಬೆಳಗೆರೆ ಅವರು ನಿಷ್ಕಾಮ ಕರ್ಮ ಅಥವಾ ನಿಸ್ವಾರ್ಥ ಸೇವೆ ಅನ್ನುವುದನ್ನೂ ಸ್ವಲ್ಪ ಅರ್ಥೈಸಿಕೊಳ್ಳಬೇಕು. ಅದು ನಮ್ಮ ಧರ್ಮದ ಬುನದಿಗಳಲ್ಲಿ ಒಂದು ಎನ್ನುವುದು ನನ್ನ ಭಾವನೆ.
ಒಟ್ಟಾರೆ ಹೇಳುವುದಾದರೆ ಮತಾಂತರ ವಿಷಯವನ್ನು ಬೆಳಗೆರೆ ಅವರು ನೋಡುವುದಕ್ಕಿಂತ ಹೆಚ್ಚು ಗಂಭೀರವಾಗಿ ಪರಿಗಣಿಸುವ ಅಗತ್ಯ ನಮ್ಮೆಲ್ಲದಾಗಿದೆ. ನಮ್ಮ ಧರ್ಮವನ್ನು ಬಿಟ್ಟುಕೊಡಲು ಇದು ಉಗಾಂಡವೂ ಅಲ್ಲ , ಕೀನ್ಯ ತಾನಝೇನಿಯಾವೋ ಅಲ್ಲ ..

Comments:
<< Home
super article guru!
although It took a long time for me to read it since it was all written in kannada!
-I
Post a Comment